"ಜಾತಕ ತೋರಿಸಲು ಹೋದ ಯುವತಿ ಮೇಲೆ ಅರ್ಚಕನಿಂದ ಅತ್ಯಾಚಾರ..!"
"ಜಾತಕ ತೋರಿಸಲು ಹೋದ ಯುವತಿ ಮೇಲೆ ಅರ್ಚಕನಿಂದ ಅತ್ಯಾಚಾರ..!"
ಮೂಡಿಗೆರೆ: ಮದುವೆಗಾಗಿ ಜಾತಕ ತೋರಿಸಲು ಹೋದ ಯುವತಿಯ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ಎಸಗಿದ ಆರೋಪ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಕೇಳಿಬಂದಿದೆ.
ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣರಾವ್ ವಿರುದ್ಧ ಬಣಕಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಜಾತಕದಲ್ಲಿ ದೋಷವಿದೆ ಎಂದು ಹೆದರಿಸಿ 2025 ನವೆಂಬರ್ 23ರಿಂದ 2026 ಫೆಬ್ರವರಿ 2ರವರೆಗೆ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪವಿದೆ.
ಇದೀಗ ನೊಂದ ಯುವತಿ ಅರ್ಚಕನ ವಿರುದ್ಧ ದೂರು ನೀಡಿದ್ದಾಳೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ' ಭಾರತೀಯ ನ್ಯಾಯ ಸಂಹಿತೆ ' (BNS) ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರೋ ಬಣಕಲ್ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
Comments
Post a Comment