ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : ನಾಲ್ವರ ಸಾವು..! ತೀರ್ಥಹಳ್ಳಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ವಾಸಿಯ ( ತೆಕ್ಕೂರು ಸರ್ಕಲ್ ಸಮೀಪ ಕೆಳ ಮೆಣಸೆ ) ಮುಸ್ಲಿಂ ಕುಟುಂಬ ಶಿವಮೊಗ್ಗದಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಶಿಫ್ಟ್ ಡಿಸೈರ್( KA-14 B 7849 )ಎಲ್ಲೊ ಬೋರ್ಡ್ ಸಂಖ್ಯೆಯ ಕಾರಿನಲ್ಲಿ ಹಿಂದಿರುಗಿ ಬರುತ್ತಿದ್ದ ಕೆ.ಎಸ್.ಆರ್ಟಿಸಿ. ಬಸ್ ಗೆ ಡಿಕ್ಕಿ ಯಾದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ವೃದ್ಧ ಮಹಿಳೆ ಹಾಗೂ ಓರ್ವ ಬಾಲಕ (10ನೇ ತರಗತಿ )ಸ್ಥಳದಲ್ಲಿಯೇ ಮೃತಪಟ್ಟಿದ್ದು ಉಳಿದವರನ್ನು ಶಿವಮೊಗ್ಗ N,A,H ಆಸ್ಪತ್ರೆಗೆ ರವಾನಿಸಲಾಗಿತ್ತು. ಮಕ್ಕಳಲ್ಲಿ ಮೂವರು 3ನೇ ತರಗತಿ,8ನೇ ತರಗತಿ ಹಾಗೂ 9ನೇತರಗತಿ ಓದುತ್ತಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಒಟ್ಟು ಮಹಿಳೆ ಸೇರಿ 4 ಜನರ ದಾರುಣ ಸಾವು ಸಂಭವಿಸಿದೆ. ಮೃತರಲ್ಲಿ ಮೊಹಮ್ಮದ್ ರಿಹಾನ್(14) ಮೊಹಮ್ಮದ್ ರಾಹಿಲ್(9) ಮೊಹಮ್ಮದ್ ಝಯಾನ್ (15) ಅಜ್ಜಿ ಫಾತಿಮಾ(76) ಎಂಬ ನಾಲ್ವರ ಹೆಸರು ಲಭ್ಯವಾಗಿದ್ದು ದಾವಣಗೆರೆ ಸಮೀಪ ಚನ್ನಗಿರಿ ಮದುವೆ ಕಾರ್ಯಕ್ರಮಕ್ಕೆಂದು ಹೋಗಿ ಶಿವಮೊಗ್ಗ ಮಾರ್ಗದಲ್ಲಿ ಹಿಂತಿರುಗುವಾಗ ತೀರ್ಥಹಳ್ಳಿಯ ಭಾರತೀಪುರ ಸಮೀಪದಲ್ಲಿ ದುರ್ಘಟನೆ...
"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ " ಹರಿಹರಪುರ :ಡಿ.23/2025 (ಕ.ಸಿ.ನ್ಯೂಸ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಹರಿಹರಪುರ, ಅಸಗೋಡು(ದಾಸನಕೊಡಿಗೆ) ಎಂಬಲ್ಲಿ ನರಸಿಂಹಾಚಾರಿ ಎಂಬುವರ ಪುತ್ರಿ ದಿಶಾ ಯಾನಿ ನವ್ಯತಾ (17) ವರ್ಷ ವಯಸ್ಸಿನ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಮಾರು 12:30pm ರ ಸುಮಾರಿಗೆ ನಡೆದಿದೆ. ಅಸಗೋಡು ನರಸಿಂಹಾಚಾರಿ ಎಂಬುವವರು ಇಬ್ಬರು ಪುತ್ರಿಯರನ್ನು ಹೊಂದಿದ್ದು ದಿಶಾ ಯಾನಿ ನವ್ಯತಾ ಹಿರಿಯ ಮಗಳಾಗಿದ್ದು ಈಕೆ ಹರಿಹರಪುರದ ಎ.ಆರ್.ಎಸ್.ಪಿ.ಯು . ಕಾಲೇಜಿನ ವಿದ್ಯಾರ್ಥಿನಿಯಾಗಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಹಾಗೂ ಉತ್ತಮ ಕ್ರೀಡಾಪಟು ಆಗಿದ್ದಳು ಎಂದು ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ನರಸಿಂಹಾಚಾರ್ಯರ ಎರಡನೇ ಪುತ್ರಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಘಟನೆ ವಿವರ : ದಿನಾಂಕ 23 ಮಂಗಳವಾರ ಕಾಲೇಜಿಗೆ ಜ್ವರ ಇರುವ ಕಾರಣ ದಿಶಾ/ ನವ್ಯತಾ ರಜೆಯನ್ನು ಹಾಕಿದ್ದು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ತಾಯಿ ಮನೆಯ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಧ್ಯಾಹ್ನ 12:30ರ ಸುಮಾರಿಗೆ ನೇ...
" ಶೃಂಗೇರಿ ಯಲ್ಲಿ ಭೀಕರ ಅಪಘಾತ" ಶೃಂಗೇರಿ: ನವಂಬರ್ 20 ಶೃಂಗೇರಿಯ ಉಳುವೆಯಲ್ಲಿ ಮಂಗಳವಾರ ರಾತ್ರಿ 12:00 ಘಂಟೆ ಸುಮಾರಿಗೆ ಶಿವಮೊಗ್ಗಕ್ಕೆ ತೆರಳಿದ್ದ ಸೂಪರ್ ಕ್ಯಾರಿ ಗೂಡ್ಸ್ ವಾಹನವು ಹಿಂತಿರುಗಿ ಬರುವಾಗ ಉಳುವೆ ಸಮೀಪ ಚಾಲಕನ ಆಯತಪ್ಪಿ ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ನಿರ್ಮಿಸಿರುವ ತಡೆ ಗೋಡೆಗೆ ರಭಸವಾಗಿ ಗುದ್ದಿರುವ ಪರಿಣಾಮವಾಗಿ ವಾಹನವು ನಜ್ಜುಗುಜ್ಜಾಗಿದೆ ವಾಹನದಲ್ಲಿ ವಾಹನ ಚಾಲಕರಾದ ವಾಹನದ ಮಾಲೀಕರು ರಾಘವೇಂದ್ರ ಆಚಾರಿ ಹಾಗೂ ಅವರ ಸ್ನೇಹಿತ ರಾಘವೇಂದ್ರ ಆಚಾರಿ ಇಬ್ಬರೂ ಕೂಡ ಶೃಂಗೇರಿಗೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಾಹನಕ್ಕೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು ವಾಹನದಲ್ಲಿದ್ದ ಇಬ್ಬರು ಸವಾರರಿಗೆ ಯಾವುದೇ ತರದಲ್ಲಿ ಪ್ರಾಣಹಾನಿಯಾಗಿಲ್ಲ ಅಂದರೆ ಪ್ರಾಣಪಾಯದಿಂದ ಪಾರಾಗಿದ್ದಾರೆ ವಾಹನ ಚಾಲಕ ರಾಘವೇಂದ್ರ(ಮಾಲೀಕ ) ಇವರ ಸ್ನೇಹಿತ ರಾಘವೇಂದ್ರರನ್ನು ಉಡುಪಿ ಆದರ್ಶ ಆಸ್ಪತ್ರೆ ಗೆ ರವಾನಿಸಲಾಗಿದೆ, ಎಂದು ವಾಹನ ಚಾಲಕ ರಾಘವೇಂದ್ರ(ಮಾಲೀಕ)ರವರು ಕರ್ನಾಟಕ ಸಿಟಿಝನ್ ನ್ಯೂಸ್ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಈ ವಾಹನವು ಶೃಂಗೇರಿ ಯ ಕೆರೆದಂಡೆಯಲ್ಲಿರುವ ಸೂರ್ಯ ಹಾರ್ಡ್ವೇರ್ ಅವರದ್ದಾಗಿರುತ್ತದೆ. ...
Comments
Post a Comment