" ತಾಯಿ ಆಡಿದ ಬುದ್ದಿಮಾತು : ಮಗಳು ಆತ್ಮಹತ್ಯೆಗೆ ಶರಣು "
" ತಾಯಿ ಆಡಿದ ಬುದ್ದಿಮಾತು : ಮಗಳು ಆತ್ಮಹತ್ಯೆಗೆ ಶರಣು "
ಚಿಕ್ಕಮಗಳೂರು :" ತಾಯಿ ಬೈದಿದ್ದಕ್ಕೆ ಬಾಲಕಿ ಆತ್ಮಹತ್ಯೆ"
ಟಿವಿ ನೋಡುವುದು ಕಡಿಮೆ ಮಾಡು ಎಂದು ತಾಯಿ ಬೈದಿದ್ದಕ್ಕೆ ಬಾಲಕಿಯೊಬ್ಬಳು ವೇಲ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆಯಲ್ಲಿ ಇಂದು ನಡೆದಿದೆ.
ಪ್ರತಿ ದಿನ ಟಿವಿ ನೋಡುತ್ತ ಬಾಲಕಿ ಸುಪ್ರಿತಾ ಊಟ ಮಾಡುತ್ತಿದ್ದಳು. ಇಂದು ಕೂಡ ಹಾಗೆಯೇ ಊಟ ಮಾಡುತ್ತಿದ್ದಾಗ ಬಾಲಕಿ ಸುಪ್ರಿತಾ ಕೈಯಿಂದ ತಟ್ಟೆ ಕೆಳಗೆ ಬಿದ್ದಿತ್ತು. ಇದರಿಂದ ಕೋಪಗೊಂಡಂತ ಸುಪ್ರಿತಾ ತಾಯಿ ಟಿವಿ ನೋಡುವುದನ್ನು ಕಡಿಮೆ ಮಾಡು ಎಂಬುದಾಗಿ ಬುದ್ಧಿ ಹೇಳಿದ್ದರು. ಸುಪ್ರಿತಾ ತಾಯಿ ಕೆಲಸಕ್ಕೆ ಹೋದಂತ ಸಂದರ್ಭದಲ್ಲಿ ಮನನೊಂದು ವೇಲ್ ನಿಂದ ಮನೆಯ ಮೇಲ್ಪಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಬಾಲಕಿ ತಾಯಿ ಸರೋಜ ಗಂಡನಿಂದ ಬೇರೆಯಾಗಿ ಬೇರೆ ವಾಸವಾಗಿದ್ದರು. ಹಿರಿಯ ಮಗಳು ತಾಯಿ ಜೊತೆ ಇದ್ದರೆ, ಕಿರಿಯ ಮಗಳು ತಂದೆ ಜೊತೆ ಇದ್ದಳು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದ್ದು.ಈಕುರಿತು
ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
Post a Comment