ಊಟಕ್ಕೆ ಹೋಗಲು ರಸ್ತೆ ದಾಟುವಾಗ ಭೀಕರ ಅಪಘಾತ: ಬೈಕ್ ಡಿಕ್ಕಿ, ಯುವತಿ ಬಲಿ..!
ಊಟಕ್ಕೆ ಹೋಗಲು ರಸ್ತೆ ದಾಟುವಾಗ ಭೀಕರ ಅಪಘಾತ: ಬೈಕ್ ಡಿಕ್ಕಿ, ಯುವತಿ ಬಲಿ..!
ಬೆಂಗಳೂರು: ಊಟಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ಭೀಕರ ಅಪಘಾತ (Deadly Accident) ಸಂಭವಿಸಿದೆ. ರಾಜ್ ಕುಮಾರ್ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಈ ದುರ್ಘಟನೆ ನಡೆದಿದೆ. ಊಟಕ್ಕೆ ಹೋಗಲು ರಸ್ತೆ ದಾಟುತ್ತಿದ್ದ 27 ವರ್ಷದ ಯುವತಿ ಯೋಗೇಶ್ವರಿ ಅವರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ (Bike Touch) ಹೊಡೆದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯೋಗೇಶ್ವರಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಘಟನೆ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಯೋಗೇಶ್ವರಿ ಕೆಂಪೇಗೌಡ ಲೇಔಟ್ (ಲಗ್ಗೆರೆ ಬಳಿ) ನಿವಾಸಿಯಾಗಿದ್ದರು. ಊಟಕ್ಕೆ ಹೋಗುವ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದಾಗ ರಭಸವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ.
ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ: ಯುವತಿ ಬಲಿ
ಇತ್ತ ಯುವತಿ ಕೂಡ ವೇಗವಾಗಿ ಬಂದು ರಸ್ತೆ ದಾಟುತ್ತಿದ್ದಿದ್ದು ಕಾಣುತ್ತದೆ. ಅತ್ತ ಬೈಕ್ ಸವಾರ ಕೂಡ ವೇಗವಾಗಿ ಬರುತ್ತಿದ್ದು, ಈ ಸ್ಪೀಡ್ ಹೆಚ್ಚಾಗಿದ್ದರಿಂದ ಯುವತಿ ರಸ್ತೆ ಮೇಲೆ ಹಾರಿ ಬಿದ್ದಿದ್ದಾಳೆ. ತಕ್ಷಣವೇ ಸ್ಥಳೀಯರು ಆಂಬ್ಯುಲೆನ್ಸ್ ಕರೆಸಿ ಯುವತಿಯನ್ನು ಸುಗುಣ ಆಸ್ಪತ್ರೆಗೆ ದಾಖಲಿಸಿದರು. ಆದರೆ ಗಾಯಗಳು ತೀವ್ರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗಲಿಲ್ಲ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಶವವನ್ನು ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರಾಜಾಜಿನಗರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರುವುದು ದೃಢಪಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್ ಸವಾರನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ಸವಾರನ ಗುರುತು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಯೋಗೇಶ್ವರಿ ಕುಟುಂಬಕ್ಕೆ ತೀವ್ರ ಆಘಾತ
ಯೋಗೇಶ್ವರಿ ಕುಟುಂಬದವರು ಈ ದುಃಖದ ಸಮಯದಲ್ಲಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ರಸ್ತೆ ದಾಟುವಾಗ ಸ್ಪೀಡ್‌ನಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಹೇಳಿದ್ದಾರೆ. ಅಪಘಾತದ ನಂತರ ಸ್ಥಳೀಯರು ಮತ್ತು ಸಂಚಾರಿ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡರು. ಆದರೆ ಯುವತಿಯ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಈ ಘಟನೆಯಿಂದ ರಸ್ತೆಯಲ್ಲಿ ಕಾಲ್ನಡಿಗರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ರಾಜ್ ಕುಮಾರ್ ರಸ್ತೆಯಂತಹ ರಸ್ತೆಗಳಲ್ಲಿ ವಾಹನ ಸವಾರರು ಸ್ಪೀಡ್ ಕಡಿಮೆ ಮಾಡಿ ಸಂಚರಿಸಬೇಕು ಎಂಬ ಸಂದೇಶ ಹೊರಹೊಮ್ಮಿದೆ. ಜೊತೆಗೆ ರಸ್ತೆ ದಾಟುವವರು ಎಚ್ಚರಿಕೆಯಿಂದ ಹಿಂದೆ ಮುಂದೆ ನೋಡಿ ದಾಟಬೇಕು ಎಂದು ಹೇಳಲಾಗಿದೆ. ಪೊಲೀಸರು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಯೋಗೇಶ್ವರಿ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.
Comments
Post a Comment