"ರಸ್ತೆ ಪಕ್ಕ ನಿಂತಿದ್ದ ಕಾರಿಗೆ B.M.W ಕಾರು ಗುದ್ದಿದ ರಬಸಕ್ಕೆ ನಿಂತ ಕಾರಿನಲ್ಲಿದ್ದ ಮಹಿಳೆ ಸಾವು..!"
"ರಸ್ತೆ ಪಕ್ಕ ನಿಂತಿದ್ದ ಕಾರಿಗೆ B.M.W ಕಾರು ಗುದ್ದಿದ ರಬಸಕ್ಕೆ ನಿಂತ ಕಾರಿನಲ್ಲಿದ್ದ ಮಹಿಳೆ ಸಾವು..!"
ತೀರ್ಥಹಳ್ಳಿ :ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ರಸ್ತೆ ಪಕ್ಕ ಕಾರ್ ನಿಲ್ಲಿಸಿಕೊಂಡು ಕಾರಿನಲ್ಲಿ ಅಶೋಕ್ -ಮಲ್ಲಿಕಾ ದಂಪತಿ ಕುಳಿತಿದ್ದರು. ಅದೇ ತಪ್ಪಾಯ್ತು. ಹಿಂದಿನಿಂದ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರ್ ಡಿಕ್ಕಿ ಹೊಡೆದು ಮಲ್ಲಿಕಾ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಶಾಲೆ ಎದುರು ಇಂದು ಬೆಳಿಗ್ಗೆ ಎರಡು ಕಾರ್ ಗಳ ನಡುವೆ ಅಪಘಾತ ಸಂಭವಿಸಿದೆ. ರಸ್ತೆ ಪಕ್ಕ ನಿಂತಿದ್ದ ಕಾರಿಗೆ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ರಸ್ತೆ ಪಕ್ಕ ನಿಂತಿದ್ದ ಕಾರ್ ನಲ್ಲಿದ್ದ ಮಲ್ಲಿಕಾ ಎಂಬ ಮಹಿಳೆ ಹಾಗೂ ಪತಿ ಅಶೋಕ್‌ಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳನ್ನು ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೇ, ಮಲ್ಲಿಕಾ ಎಂಬ ಮಹಿಳೆಯ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣದಿಂದ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಮೇಗರವಳ್ಳಿ ಶಾಲೆ ಎದುರು ನಡೆದ ಅಪಘಾತದಿಂದ ಎರಡು ಕಾರುಗಳು ಸಂಪೂರ್ಣ ಜಖಂವಾಗಿದ್ದವು. ರಸ್ತೆ ಪಕ್ಕ ಕಾರ್ ನಿಲ್ಲಿಸಿಕೊಂಡು ಮೇಗರವಳ್ಳಿ ಗ್ರಾಮದ ಅಶೋಕ್- ಮಲ್ಲಿಕಾ ದಂಪತಿ ಕಾರಿನಲ್ಲೇ ಕುಳಿತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರ್ ಅಶೋಕ್ ದಂಪತಿ ಕುಳಿತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
Comments
Post a Comment