Posts

Showing posts from March, 2026

ಸೇತುವೆಯಿಂದ ಕೆಳಗೆ ಹಳ್ಳಕ್ಕೆ ಬಿದ್ದ ಖಾಸಗಿ ಬಸ್; 36 ಜನರಿಗೆ ಗಾಯ..!

Image
ಸೇತುವೆಯಿಂದ ಕೆಳಗೆ  ಹಳ್ಳಕ್ಕೆ ಬಿದ್ದ ಖಾಸಗಿ ಬಸ್; 36 ಜನರಿಗೆ ಗಾಯ.!! ನೆನ್ನೆ ಮಧ್ಯಾಹ್ನ 1.30 ರ ಸುಮಾರಿಗೆ ಭದ್ರಾವತಿ ತಾಲ್ಲೂಕಿನ ವೀರಾಪುರ ಗ್ರಾಮದ ಕಾಗೆಹಳ್ಳ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಉರುಳಿ ಬಿದ್ದಿದ್ದು, ಅಪಘಾತದಲ್ಲಿ ಮೂವತ್ತಾರು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ 1.30 ರ ಸುಮಾರಿಗೆ ಭದ್ರಾವತಿ ತಾಲ್ಲೂಕಿನ ವೀರಾಪುರ ಗ್ರಾಮದ ಕಾಗೆಹಳ್ಳ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರ, ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಭದ್ರಾವತಿಗೆ ತೆರಳುತ್ತಿದ್ದ ಖಾಸಗಿ ಬಸ್, ಕಾಗೇಹಳ್ಳದ ಬಳಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು, ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ.

ಇನ್ನು ನಿಮ್ಮ ಸಹಾಯಕ್ಕೆ ಅಮೆರಿಕ ಇಲ್ಲ, ಹಾರ್ಮುಜ್​ಗೆ ಹೋಗಿ ತೈಲ ಪಡೆದುಕೊಳ್ಳಿ: ಮಿತ್ರರಾಷ್ಟ್ರಗಳಿಗೆ ಟ್ರಂಪ್ ಚಾಟಿ..!

Image
ಇನ್ನು ನಿಮ್ಮ ಸಹಾಯಕ್ಕೆ ಅಮೆರಿಕ ಇಲ್ಲ, ಹಾರ್ಮುಜ್​ಗೆ ಹೋಗಿ ತೈಲ ಪಡೆದುಕೊಳ್ಳಿ: ಮಿತ್ರರಾಷ್ಟ್ರಗಳಿಗೆ ಟ್ರಂಪ್ ಚಾಟಿ..! ಮಧ್ಯಪ್ರಾಚ್ಯದ ಸಂಘರ್ಷ ನಡುವೆ ಅಮೆರಿಕ ಡೊನಾಲ್ಡ್ ಟ್ರಂಪ್ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿದ ದೇಶಗಳ ವಿರುದ್ಧ ಕೆಂಡಾಮಂಡಲವಾಗಿದ್ದು, ನೀವೇ ಹಾರ್ಮುಜ್ ಜಲಸಂಧಿಗೆ ತೆರಳಿ ತೈಲ ಖರೀದಿಸಿ, ನಿಮ್ಮ ಸಹಾಯಕ್ಕೆ ನಾವು ಇಲ್ಲ ಎಂದು ನೇರವಾಗಿ ಚಾಟಿ ಬೀಸಿದರು . ಹಾರ್ಮುಜ್ ಜಲಸಂಧಿ ಮೇಲೆ ಕಣ್ಣಿಟ್ಟಿರುವ ಟ್ರಂಪ್ ಗೆ ನೆರೆ ದೇಶಗಳು ಸಹಾಯ ಮಾಡಲು ನಿರಾಕರಿಸಿದ್ದು, ಈ ಕಾರಣದಿಂದ ದೊಡ್ಡಣ್ಣ ಖಡಕ್ ಸೂಚನೆ ನೀಡಿದೆ. ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್​ನಲ್ಲಿ , ಬ್ರಿಟನ್ ಸಹಿತ ಇತರ ದೇಶಗಳ ವಿರುದ್ಧ ಆಕ್ರೋಶ ಹೊರಹಾಕಿದ ಟ್ರಂಪ್ , ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸುವ ದೇಶಗಳಿಗೆ ನನ್ನ ಸಲಹೆ ಏನೆಂದರೆ, ಒಂದೋ ಅಮೆರಿಕದಿಂದ ತೈಲ ಖರೀದಿಸಿ. ನಮ್ಮಲ್ಲಿ ಸಾಕಷ್ಟು ತೈಲ ಇದೆ. ಇಲ್ಲವೇ ನೀವೇ ಧೈರ್ಯ ಮಾಡಿ ಜಲಸಂಧಿಗೆ ಹೋಗಿ ತೈಲ ತೆಗೆದುಕೊಳ್ಳಿ' ಎಂದು ಖಡಕ್ ಆಗಿ ಹೇಳಿದ್ದಾರೆ. ಯಾವ ರೀತಿ ನೀವು ಅಮೆರಿಕದ ಸಹಾಯಕ್ಕೆ ಇಲ್ಲವೋ, ಅದೇ ರೀತಿ ಮುಂದಿನ ದಿನಗಳಲ್ಲಿ ನಿಮಗೆ ಸಹಾಯ ಮಾಡಲು ಅಮೆರಿಕ ಇರುವುದಿಲ್ಲ. ಈಗಾಗಲೇ ಇರಾನ್ ನ ಪ್ರಮುಖ ಸ್ಥಳಗಳನ್ನು ನೆಲಸಮ ಮಾಡಿದ್ದೇವೆ. ನಿಮ್ಮ ತೈಲವನ್ನು ಪಡೆದುಕೊಳ್ಳಿ ಹೋಗಿ ಎಂದು ಟ್ರಂಪ್ ಸವಾಲು ಹಾಕಿದ್ದಾರೆ.

ʻಹಳ್ಳಿ ಹೈದ ಪ್ಯಾಟೆಗೆ ಬಂದʼ ಖ್ಯಾತಿಯ ಬಾವತೀಶ್‌ ಬೈಕ್‌ ಅಪಘಾತಕ್ಕೆ ಬಲಿ..!

Image
ʻಹಳ್ಳಿ ಹೈದ ಪ್ಯಾಟೆಗೆ ಬಂದʼ ಖ್ಯಾತಿಯ ಬಾವತೀಶ್‌ ಬೈಕ್‌ ಅಪಘಾತಕ್ಕೆ ಬಲಿ..! ಉ.ಕ.ಜಿಲ್ಲೆ: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ʻಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್‌ 3'ರ ಮೂಲಕ ನಾಡಿನ ಮನೆನಾತಾಗಿದ್ದ ಯುವ ಪ್ರತಿಭೆ ಬಾವತೀಶ್‌ (28) ಭೀಕರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಬಳಿ ಈ ದುರ್ಘಟನೆ ಸಂಭವಿಸಿದೆ. ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬಾವತೀಶ್‌ ಬೈಕ್‌ ಡಿಕ್ಕಿ! ಮೂಲತಃ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ಗ್ರಾಮದ ನಿವಾಸಿಯಾದ ಬಾವತೀಶ್, ಮಂಗಳವಾರ ಮಧ್ಯಾಹ್ನ ತಮ್ಮ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ, ರಸ್ತೆ ಬದಿಯಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬಾವತೀಶ್‌ ಅವರ ಬೈಕ್‌ ಹಿಂಬದಿಯಿಂದ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ತಲೆಗೆ ಬಿದ್ದ ಬಲವಾದ ಪೆಟ್ಟು ಮತ್ತು ಸುಟ್ಟ ಗಾಯಗಳಿಂದ ಬಾವತೀಶ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರಸ್ತುತ ಈ ಬಗ್ಗೆ ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻಹಳ್ಳಿ ಹೈದ ಪ್ಯಾಟೆಗೆ ಬಂದʼ ರಿಯಾಲಿಟಿ ಶೋ ಕರ್ನಾಟಕದಾದ್ಯಂ...

ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್..!

Image
ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್..! ಟೆಹ್ರಾನ್ , ಮಾರ್ಚ್ 25: ಕಳೆದ 2 ದಿನಗಳಿಂದ ಡೊನಾಲ್ಡ್ ಟ್ರಂಪ್ (Donald Trump) ಈ ಯುದ್ಧ ಸಾಕಾಗಿದೆ ಎಂಬಂತೆ ವರ್ತಿಸಿದ್ದರು. ಇರಾನ್ ಜೊತೆ ಕದನವಿರಾಮದ ಸುಳಿವನ್ನೂ ನೀಡಿದ್ದರು. ಹಾಗೇ, ಇರಾನ್ ಮೇಲಿನ ದಾಳಿಯನ್ನು ಕೊನೆಗೊಳಿಸಲು 15 ಅಂಶಗಳ ಶಾಂತಿ ಯೋಜನೆಯನ್ನು ಘೋಷಿಸಿದ್ದರು. ಆದರೆ, ಅವರ ಈ ನಿರ್ಧಾರವನ್ನು ತಿರಸ್ಕರಿಸಿರುವ ಇರಾನ್ ಅಮೆರಿಕಕ್ಕೆ ತಕ್ಕ ತಿರುಗೇಟು ನೀಡಿದೆ. ಈ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು, ಹೇಗೆ ಕೊನೆಗೊಳಿಸಬೇಕೆಂದು ಟ್ರಂಪ್ ನಿರ್ಧರಿಸಲು ನಾವು ಅವಕಾಶ ನೀಡುವುದಿಲ್ಲ. ಈ ಯುದ್ಧ ನಿಲ್ಲಬೇಕಾದರೆ ನಾವು ಹಾಕುವ 5 ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಇರಾನ್ ಘೋಷಿಸಿದೆ. ತನ್ನ ಷರತ್ತುಗಳು ಪೂರೈಸಿದರೆ ಮಾತ್ರ ಯುದ್ಧವನ್ನು ಕೊನೆಗೊಳಿಸುವುದಾಗಿ ಇರಾನ್ ಹೇಳಿದೆ. ಕದನ ವಿರಾಮಕ್ಕೆ ಸಮಯವನ್ನು ನಿಗದಿಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಯತ್ನವನ್ನು ದೃಢವಾಗಿ ತಿರಸ್ಕರಿಸಿರುವ ಇರಾನ್ ಅಮೆರಿಕ ಪಶ್ಚಿಮ ಏಷ್ಯಾದ ಯುದ್ಧದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದೆ ಎಂದು ಟೀಕಿಸಿದೆ. ಇದರ ನಡುವೆ ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಇರಾನ್ ದೃಢ ನಿಲುವನ್ನು ತೆಗೆದುಕೊಂಡಿದೆ. ಯುದ್ಧ ನಿಲ್ಲಿಸಲು ಇರಾನ್ ಹಾಕಿರುವ 5 ಪ್ರಮುಖ ಷರತ್ತುಗಳು ಹೀಗಿವೆ. 1. ಅಮೆರಿಕ ಮತ್ತು ಇಸ್ರೇಲ್‌ನಿಂದ...

ಬಸ್ ಹತ್ತಲು ಮುಗಿಬಿದ್ದ ವಿದ್ಯಾರ್ಥಿಗಳು - ಚಕ್ರಕ್ಕೆ ಸಿಲುಕಿ ಕಾಲೇಜು ವಿದ್ಯಾರ್ಥಿನಿಯ ಕಾಲು ನುಜ್ಜುಗುಜ್ಜು.!

Image
ಬಸ್ ಹತ್ತಲು ಮುಗಿಬಿದ್ದ ವಿದ್ಯಾರ್ಥಿಗಳು - ಚಕ್ರಕ್ಕೆ ಸಿಲುಕಿ ಕಾಲೇಜು ವಿದ್ಯಾರ್ಥಿನಿಯ ಕಾಲು ನುಜ್ಜುಗುಜ್ಜು.! ತುಮಕೂರು: ನಗರದ ದೇವರಾಜ್ ಅರಸ್ ಕೆ ಎಸ್‌ ಆರ್‌ ಟಿ ಸಿ ಬಸ್ ನಿಲ್ದಾಣದಲ್ಲಿ ಇಂದು ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಲು ಏಕಾಏಕಿ ಮುಗಿಬಿದ್ದ ಪರಿಣಾಮ, ದಾರುಣ (Shocking) ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಬಸ್‌ನ ಹಿಂಬದಿಯ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿಯೊಬ್ಬಳ ಕಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ತುಮಕೂರಿನಿಂದ ಪಾವಗಡಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ, ಅಲ್ಲಿದ್ದ ನೂರಾರು ಕಾಲೇಜು ವಿದ್ಯಾರ್ಥಿಗಳು ಸೀಟು ಹಿಡಿಯುವ ತರಾತುರಿಯಲ್ಲಿ ಒಮ್ಮೆಲೇ ಬಸ್‌ನ ಬಾಗಿಲಿನ ಬಳಿ ನುಗ್ಗಿದ್ದಾರೆ. ಈ ನೂಕುನುಗ್ಗಲಿನ ನಡುವೆ, ವಿದ್ಯಾರ್ಥಿನಿಯೊಬ್ಬಳು ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ದುರದೃಷ್ಟವಶಾತ್, ಅದೇ ಸಮಯದಲ್ಲಿ ಬಸ್ ಚಲಿಸಿದ್ದರಿಂದ ಆಕೆಯ ಕಾಲು ಬಸ್‌ನ ಹಿಂದಿನ ಚಕ್ರದ ಕೆಳಗೆ ಸಿಲುಕಿದೆ. ಈ ಭೀಕರ ಅಪಘಾತದಲ್ಲಿ ವಿದ್ಯಾರ್ಥಿನಿಯ ಕಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಅಲ್ಲಿದ್ದವರು ಮತ್ತು ಬಸ್ ನಿಲ್ದಾಣದ ಸಿಬ್ಬಂದಿ ಗಾಯಾಳು ವಿದ್ಯಾರ್ಥಿನಿಯನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಕೆಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಮಲೆನಾಡಿನಲ್ಲಿ ಗುಡುಗು,ಮಿಂಚು ಸೇರಿ ಧಾರಾಕಾರ ಮಳೆಗೆ ಉರುಳಿ ಬಿದ್ದ ಮರ ಟ್ರಾಫಿಕ್ ಜಾಮ್..!

Image
ಮಲೆನಾಡಿನಲ್ಲಿ ಗುಡುಗು,ಮಿಂಚು ಸೇರಿ ಧಾರಾಕಾರ ಮಳೆಗೆ ಉರುಳಿ ಬಿದ್ದ ಮರ ಟ್ರಾಫಿಕ್ ಜಾಮ್..! ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆಲವು ದಿನಗಳಿಂದ ಗುಡುಗು,ಸಿಡಿಲು ಮಿಂಚು ಸಭಾವಿಸುತ್ತಿದ್ದೂ ಇಂದು ಭಾರಿ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ.  ಕೊಪ್ಪ ತಾಲ್ಲೂಕು ಜಯಪುರ ಗುಡ್ಡೆತೋಟದ ಬಳಿ ರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಶೃಂಗೇರಿ-ಹೊರನಾಡು ಸಂಪರ್ಕ ಕಡಿತಗೊಂಡು, ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.

ಈ ಒಂದು ಅಪಾಯಕ ಹೆಜ್ಜೆ ಇಟ್ಟರೆ ಇಡೀ ವಿಶ್ವವೇ ಸ್ತಬ್ಧ! ಇಂಟರ್​ನೆಟ್​ ಇಲ್ಲದೇ ಜಗತ್ತು ಅಲ್ಲೋಲ ಕಲ್ಲೋಲ..!

Image
ಈ ಒಂದು ಅಪಾಯಕ ಹೆಜ್ಜೆ ಇಟ್ಟರೆ ಇಡೀ ವಿಶ್ವವೇ ಸ್ತಬ್ಧ! ಇಂಟರ್​ನೆಟ್​ ಇಲ್ಲದೇ ಜಗತ್ತು ಅಲ್ಲೋಲ ಕಲ್ಲೋಲ..! ಇರಾನ್​, ಇಸ್ರೇಲ್​ ಮತ್ತು ಅಮೆರಿಕದ ನಡುವಿನ ಯುದ್ಧದ ಭೀತಿಯಿಂದ ಇದಾಗಲೇ ಬಹುತೇಕ ದೇಶಗಳು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದೆ. ಸದ್ಯ ಭಾರತಕ್ಕೆ ಯಾವ ಸಮಸ್ಯೆಯೂ ಆಗದೇ, ಯಾವ ರಾಷ್ಟ್ರಗಳು ಹಾನಿಯನ್ನೂ ಮಾಡದೇ ವಿವಾದಿತ ಹಾರ್ಮುಜ್ ಜಲಸಂಧಿಯಿಂದ ಎಲ್​ಪಿಜಿ ಹೊತ್ತ ಹಡಗುಗಳು ಸುರಕ್ಷಿತವಾಗಿ ಬಂದಿವೆ. ಯುದ್ಧದ ನಡುವೆಯೂ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲದೇ ಕೆಲವು ಹಡಗುಗಳು ಬಂದಿವೆ. ಈ ಮೂಲಕ ಎಲ್​ಪಿಜಿ ಸಮಸ್ಯೆ ಒಂದು ಹಂತಕ್ಕೆ ಪರಿಹಾರವಾಗಿದೆ. ಆದರೆ ಯುದ್ಧದ ಕಾವು ಮಾತ್ರ ಜೋರಾಗುತ್ತಲೇ ಇದ್ದು, ಇದು ಎಲ್ಲಾ ದೇಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಸದ್ಯ ಎಲ್​ಪಿಜಿ ಸಮಸ್ಯೆಯಷ್ಟೇ ಉಂಟಾಗಿದ್ದರೆ, ಕೆಲವು ದೇಶಗಳಲ್ಲಿ ಇನ್ನೂ ಹೆಚ್ಚಿನ ಪ್ರಭಾವ ಉಂಟಾಗುತ್ತಿದೆ. ಆತಂಕಕಾರಿ ವರದಿ ಆದರೆ ಇದರ ನಡುವೆಯೇ, ಇದೀಗ ಆತಂಕಕಾರಿ ವರದಿಯೊಂದು ಬಂದಿದೆ. ಅದೇನೆಂದರೆ, ಇರಾನ್​ ಒಂದೇ ಒಂದು ಹೆಜ್ಜೆ ಮುಂದಕ್ಕೆ ಹೋದರೆ, ಇಡೀ ವಿಶ್ವವೇ ಸ್ತಬ್ಧವಾಗಲಿದೆ. ಇದಾಗಲೇ ಈ ಬಗ್ಗೆ ಇರಾನ್​ ಬೆದರಿಕೆಯನ್ನೂ ಹಾಕಿದೆ. ಇಲ್ಲಿ ಮುಖ್ಯವಾಗಿ ಇರುವುದು ಸಾಗಾಣಿಕೆಯ ಕೇಂದ್ರಬಿಂದುವಾಗಿರುವ ಹಾರ್ಮುಜ್ ಜಲಸಂಧಿ. ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ, ಇದರಿಂದಾಗಿ ಜಗತ್ತಿಗೆ ಇಂಧನ ಪ...

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು..!

Image
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು..! ಬೆಂಗಳೂರು :ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಬಳಿ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.  ಕೇರಳದಿಂದ ಬೆಂಗಳೂರಿನತ್ತ ಬರುತ್ತಿದ್ದ ಪಿಕೆ ಟ್ರಾವೆಲ್ಸ್ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆನ್ಸಿಂಗ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಮೃತರ ಪೈಕಿ ಇಬ್ಬರು ಬೆಂಗಳೂರಿನವರಾಗಿದ್ದು, ಕೇರಳದ ಕಣ್ಣೂರಿನ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

"ಬೀದಿ ದೀಪಗಳಿಗೆ ಕನ್ನ ಹಾಕಿದ ಕಳ್ಳರು ; ಗ್ರಾಮ ಪಂಚಾಯ್ತಿಯ 3 ಸೋಲಾರ್ ಬ್ಯಾಟರಿಗಳು ಕಳವು..!"

Image
"ಬೀದಿ ದೀಪಗಳಿಗೆ ಕನ್ನ ಹಾಕಿದ ಕಳ್ಳರು ; ಗ್ರಾಮ ಪಂಚಾಯ್ತಿಯ 3 ಸೋಲಾರ್ ಬ್ಯಾಟರಿಗಳು ಕಳವು..!" ಶೃಂಗೇರಿ: ತಾಲ್ಲೂಕಿನ ಬೇಗಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಳವಡಿಸಲಾಗಿದ್ದ ಬೀದಿ ದೀಪಗಳ ಸೋಲಾರ್ ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಈ ಸಂಬಂಧ ಬೇಗಾರು ಗ್ರಾಮ ಪಂಚಾಯ್ತಿಯ ಪ್ರಭಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಿಲ್ಪ ಅವರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ವಿವರದ ಪ್ರಕಾರ, ಫೆಬ್ರವರಿ 23ರ ರಾತ್ರಿ ಮತ್ತು 24ರ ಬೆಳಗಿನ ಜಾವದ ಅವಧಿಯಲ್ಲಿ ನಡುಬೇಗಾರು, ಬೇಗಾರು ಕೈಮರ ಹಾಗೂ ನಿಲಂದೂರು ಗ್ರಾಮದ ಸ್ಕೂಲುಗುಡ್ಡೆ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಒಟ್ಟು ಮೂರು ಸೋಲಾರ್ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. ಈ ಸೋಲಾರ್ ದೀಪಗಳನ್ನು 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಅನುದಾನದ ಅಡಿಯಲ್ಲಿ 2020ರಲ್ಲಿ ಅಳವಡಿಸಲಾಗಿತ್ತು. ಕಳ್ಳತನವಾಗಿರುವ ಈ ಬ್ಯಾಟರಿಗಳ ಒಟ್ಟು ಮೌಲ್ಯ ಸುಮಾರು 74,850 ರೂಪಾಯಿಗಳೆಂದು ಅಂದಾಜಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.

ಖಮೇನಿ ಸಾಮ್ರಾಜ್ಯದ ಹೊಸ ವಾರಸುದಾರನಿಗೆ ರಷ್ಯಾ ಸಾಥ್: ಅಮೆರಿಕಕ್ಕೆ ನಡುಕ..? ಪುಟಿನ್ ನೀಡಿದ ಆ ಒಂದು ಸಂದೇಶದ ಹಿಂದಿದೆ ಬಿಗ್ ಪ್ಲಾನ್..!

Image
ಖಮೇನಿ ಸಾಮ್ರಾಜ್ಯದ ಹೊಸ ವಾರಸುದಾರನಿಗೆ ರಷ್ಯಾ ಸಾಥ್: ಅಮೆರಿಕಕ್ಕೆ ನಡುಕ..? ಪುಟಿನ್ ನೀಡಿದ ಆ ಒಂದು ಸಂದೇಶದ ಹಿಂದಿದೆ ಬಿಗ್ ಪ್ಲಾನ್..! ಮಾಸ್ಕೋ: ವಿಶ್ವ ರಾಜಕಾರಣದಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ ನಡೆದಿದೆ. ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ಅಧಿಕಾರ ಸ್ವೀಕರಿಸಿರುವ ಮೊಜ್ತಾಬಾ ಖಮೇನಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್( Vladimir Putin) ಬಹಿರಂಗ ಬೆಂಬಲ ಘೋಷಿಸಿದ್ದಾರೆ.  ಈ ಬಗ್ಗೆ ಮಾತನಾಡಿರುವ ಪುಟಿನ್​, ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ದಾಳಿಯ ನಡುವೆಯೇ, ನಿಮ್ಮ ತಂದೆಯ ಆಶಯಗಳನ್ನು ನೀವು ಪೂರೈಸಲಿದ್ದೀರಿ ಎಂದು ಹೇಳಿದ್ದಾರೆ. ಅಲ್ಲದೆ, ಈ ಹೇಳುವ ಮೂಲಕ ಪುಟಿನ್, ಇರಾನ್ ಜೊತೆಗಿನ ರಷ್ಯಾದ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ತಂದೆಯ ವಾರಸುದಾರನಿಗೆ ಪುಟಿನ್ ಸಾಥ್ ಇತ್ತೀಚೆಗೆ ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಅಗ್ರ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಯಾದ ಬೆನ್ನಲ್ಲೇ, ಅವರ ಪುತ್ರ ಮೊಜ್ತಾಬಾ ಖಮೇನಿ ಅವರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಈ ನೇಮಕಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಪುಟಿನ್, ಮೊಜ್ತಾಬಾ ಅವರು ತಮ್ಮ ತಂದೆಯ ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಇರಾನ್ ಎದುರಿಸುತ್ತಿರುವ ಈ ಕಠಿಣ ಸಮಯದಲ್ಲಿ ರಷ್ಯಾ ನಿಮ್ಮೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ:  ನಾವು ತಟಸ್ಥರಲ್ಲ...

ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ, ಚಾಟ್‌ಜಿಪಿಟಿ ನೀಡಿದ ಸುಳಿವು..!

Image
ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆ, ಚಾಟ್‌ಜಿಪಿಟಿ ನೀಡಿದ ಸುಳಿವು..! ಗುಜರಾತ್(ಸೂರತ್ ಮಾರ್ಚ್.08) ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ದೇವಸ್ಥಾನದ ಶೌಚಾಲಯದಲ್ಲಿ ಪತ್ತೆಯಾಗಿದೆ. ಯುವತಿಯರು ನಾಪತ್ತೆಯಾದ ಬೆನ್ನಲ್ಲೇ ಹುಡುಕಾಟ ಆರಂಭಿಸಿದ ಪೊಲೀಸರು ಮೊಬೈಲ್ ಟವರ್ ಲೋಕೇಶನ್ ಆದರಿಸಿ ಪತ್ತೆ ಹಚ್ಚಿದ್ದಾರೆ. ಈ ಸಾವಿನ ಸುಳಿಯವನ್ನು ಯುವತಿಯರು ಬಳಸಿದ ಮೊಬೈಲ್‌ನಲ್ಲಿನ ಚಾಟ್‌ಜಿಪಿಟಿ ಎಐ ನೀಡಿದೆ. ಈ ಘಟನೆ ಗುಜರಾತ್ ಸೂರತ್ ಬಳಿ ಇರುವ ಸ್ವಾಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದಿದೆ. 18, 20ರ ಹರೆಯದ ಇಬ್ಬರು ವಿದ್ಯಾರ್ಥಿನಿಯರು ರೋಶ್ನಿ ಸಿರ್ಸಾತ್ ಹಾಗೂ ಜೋಶ್ನ ಚೌಧರಿ ಎಂಬ ಇಬ್ಬರು ವಿದ್ಯಾರ್ಥಿನಿಯರ ವಯಸ್ಸು 18 ಹಾಗೂ 20. ದಿಂಡೋಲಿ ವಲಯದ ನಿವಾಸಿಗಳಾಗಿರುವ ಈ ವಿದ್ಯಾರ್ಥಿನಿಯರು ಆತ್ಮೀಯ ಸ್ನೇಹಿತರಾಗಿದ್ದರು. ಮನೆಯಿಂದ ಸ್ಕೂಟರ್ ಮೂಲಕ ಕಾಲೇಜಿಗೆ ತೆರಳಿದ ಇಬ್ಬರು ವಿದ್ಯಾರ್ಥಿನಿಯರು ಮರಳಿ ಮನಗೆ ಬಂದಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ನಾಪತ್ತೆ ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪೊಲೀಸರು ಮೊಬೈಲ್ ನಂಬರ್ ಟ್ರೇಸ್ ಮಾಡಲು ಮುಂದಾಗಿದ್ದಾರೆ. ಟವರ್ ಲೋಕೇಶನ್ ಮೂಲಕ ಪತ್ತೆ ಪೊಲೀಸರು ತಕ್ಷಣವೇ ಟವರ್ ಲೋಕೇಶನ್ ಮೂಲಕ ವಿದ್ಯಾರ್ಥಿನಿಯರ ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಇದು ಆತ್ಮೀಯ ಸಂಸ್ಕಾರ ಧಾಮ ಸ್ವಾಮಿ ನಾರಾಯ...