ಖಮೇನಿ ಸಾಮ್ರಾಜ್ಯದ ಹೊಸ ವಾರಸುದಾರನಿಗೆ ರಷ್ಯಾ ಸಾಥ್: ಅಮೆರಿಕಕ್ಕೆ ನಡುಕ..? ಪುಟಿನ್ ನೀಡಿದ ಆ ಒಂದು ಸಂದೇಶದ ಹಿಂದಿದೆ ಬಿಗ್ ಪ್ಲಾನ್..!
ಖಮೇನಿ ಸಾಮ್ರಾಜ್ಯದ ಹೊಸ ವಾರಸುದಾರನಿಗೆ ರಷ್ಯಾ ಸಾಥ್: ಅಮೆರಿಕಕ್ಕೆ ನಡುಕ..? ಪುಟಿನ್ ನೀಡಿದ ಆ ಒಂದು ಸಂದೇಶದ ಹಿಂದಿದೆ ಬಿಗ್ ಪ್ಲಾನ್..!
ಮಾಸ್ಕೋ: ವಿಶ್ವ ರಾಜಕಾರಣದಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ ನಡೆದಿದೆ. ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ಅಧಿಕಾರ ಸ್ವೀಕರಿಸಿರುವ ಮೊಜ್ತಾಬಾ ಖಮೇನಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಬಹಿರಂಗ ಬೆಂಬಲ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪುಟಿನ್, ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ದಾಳಿಯ ನಡುವೆಯೇ, ನಿಮ್ಮ ತಂದೆಯ ಆಶಯಗಳನ್ನು ನೀವು ಪೂರೈಸಲಿದ್ದೀರಿ ಎಂದು ಹೇಳಿದ್ದಾರೆ.
ಅಲ್ಲದೆ, ಈ ಹೇಳುವ ಮೂಲಕ ಪುಟಿನ್, ಇರಾನ್ ಜೊತೆಗಿನ ರಷ್ಯಾದ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ತಂದೆಯ ವಾರಸುದಾರನಿಗೆ ಪುಟಿನ್ ಸಾಥ್
ಇತ್ತೀಚೆಗೆ ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಅಗ್ರ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಅವರ ಪುತ್ರ ಮೊಜ್ತಾಬಾ ಖಮೇನಿ ಅವರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಈ ನೇಮಕಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಪುಟಿನ್, ಮೊಜ್ತಾಬಾ ಅವರು ತಮ್ಮ ತಂದೆಯ ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಇರಾನ್ ಎದುರಿಸುತ್ತಿರುವ ಈ ಕಠಿಣ ಸಮಯದಲ್ಲಿ ರಷ್ಯಾ ನಿಮ್ಮೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:
ನಾವು ತಟಸ್ಥರಲ್ಲ..; ಇಸ್ರೇಲ್-ಇರಾನ್ ಸಮರದಲ್ಲಿ ರಷ್ಯಾ ಎಂಟ್ರಿ! ಯುದ್ಧದ ಕಣದಲ್ಲಿ ಬಿಚ್ಚಿಕೊಳ್ಳುತ್ತಿದೆ ಹೊಸ ರಹಸ್ಯ..? Russia
ಇರಾನ್-ರಷ್ಯಾ ಮೈತ್ರಿ: ಅಮೆರಿಕಕ್ಕೆ ನಡುಕ..?
ರಷ್ಯಾದ ಈ ನಡೆಯು ಶ್ವೇತಭವನದಲ್ಲಿ ತಲ್ಲಣ ಸೃಷ್ಟಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅನುಮತಿ ಇಲ್ಲದೆ ಇರಾನ್‌ನಲ್ಲಿ ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂದು ಗುಡುಗಿದ್ದರು. ಆದರೆ, ಪುಟಿನ್ ಅವರ ಈ ಹಸ್ತಕ್ಷೇಪವು ಅಮೆರಿಕದ ಎಚ್ಚರಿಕೆಯನ್ನು ಕಡೆಗಣಿಸಿದಂತಿದೆ. ರಷ್ಯಾ ಈಗ ಇರಾನ್‌ಗೆ ಕೇವಲ ರಾಜತಾಂತ್ರಿಕ ಬೆಂಬಲ ಮಾತ್ರವಲ್ಲದೆ, ಯುದ್ಧಭೂಮಿಯಲ್ಲಿ ಅಮೆರಿಕದ ಯುದ್ಧನೌಕೆಗಳು ಮತ್ತು ವಿಮಾನಗಳ ಚಲನವಲನದ ಬಗ್ಗೆ ರಿಯಲ್-ಟೈಮ್ ಇಂಟೆಲಿಜೆನ್ಸ್ ಹಂಚಿಕೊಳ್ಳುತ್ತಿದೆ ಎಂಬ ವರದಿಗಳು ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿವೆ.
ಯಾರು ಈ ಮೊಜ್ತಾಬಾ ಖಮೇನಿ..?
ಹಿನ್ನೆಲೆ: ಅಲಿ ಖಮೇನಿಯವರ ಎರಡನೇ ಪುತ್ರ. ಸತತ 36 ವರ್ಷಗಳ ಕಾಲ ಅಧಿಕಾರ ನಡೆಸಿದ ತಂದೆಯ ನೆರಳಿನಲ್ಲೇ ಬೆಳೆದವರು.
ಶಕ್ತಿ: ಇರಾನ್‌ನ ಪ್ರಭಾವಿ ಸೇನಾ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
ಸಂದೇಶ: ತಂದೆಯ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಹಠದಲ್ಲಿರುವ ಮೊಜ್ತಾಬಾ, ಈಗ ರಷ್ಯಾದ ಬೆಂಬಲದೊಂದಿಗೆ ಇಸ್ರೇಲ್ ವಿರುದ್ಧ ದೊಡ್ಡ ಮಟ್ಟದ ಪ್ರತಿದಾಳಿಗೆ ಸಜ್ಜಾಗುತ್ತಿದ್ದಾರೆ.
ವಿಶ್ವದ ಮೇಲೆ ಯುದ್ಧದ ಕಾರ್ಮೋಡ
ಪಶ್ಚಿಮ ಏಷ್ಯಾದ ಈ ಸಂಘರ್ಷ ಈಗ ಕೇವಲ ಇಸ್ರೇಲ್-ಇರಾನ್ ನಡುವಿನ ಹೋರಾಟವಾಗಿ ಉಳಿದಿಲ್ಲ. ಇದು ರಷ್ಯಾ ಮತ್ತು ಅಮೆರಿಕದ ನಡುವಿನ ಪರೋಕ್ಷ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಕಚ್ಚಾ ತೈಲ ಬೆಲೆ ಈಗಾಗಲೇ ಬ್ಯಾರೆಲ್‌ಗೆ 100 ಡಾಲರ್ ದಾಟಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಭೀತಿ ಸೃಷ್ಟಿಸಿದೆ. ಪುಟಿನ್ ಅವರ ಈ ರಕ್ಷಾಕವಚ ಇರಾನ್ ಅನ್ನು ಅಮೆರಿಕದ ದಾಳಿಯಿಂದ ರಕ್ಷಿಸುತ್ತದೆಯೇ ಅಥವಾ ಯುದ್ಧವನ್ನು ಇಡೀ ಜಗತ್ತಿಗೆ ಹಬ್ಬಿಸುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
Comments
Post a Comment