"ಬೀದಿ ದೀಪಗಳಿಗೆ ಕನ್ನ ಹಾಕಿದ ಕಳ್ಳರು ; ಗ್ರಾಮ ಪಂಚಾಯ್ತಿಯ 3 ಸೋಲಾರ್ ಬ್ಯಾಟರಿಗಳು ಕಳವು..!"

"ಬೀದಿ ದೀಪಗಳಿಗೆ ಕನ್ನ ಹಾಕಿದ ಕಳ್ಳರು ; ಗ್ರಾಮ ಪಂಚಾಯ್ತಿಯ 3 ಸೋಲಾರ್ ಬ್ಯಾಟರಿಗಳು ಕಳವು..!"
ಶೃಂಗೇರಿ: ತಾಲ್ಲೂಕಿನ ಬೇಗಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಳವಡಿಸಲಾಗಿದ್ದ ಬೀದಿ ದೀಪಗಳ ಸೋಲಾರ್ ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಈ ಸಂಬಂಧ ಬೇಗಾರು ಗ್ರಾಮ ಪಂಚಾಯ್ತಿಯ ಪ್ರಭಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಿಲ್ಪ ಅವರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ವಿವರದ ಪ್ರಕಾರ, ಫೆಬ್ರವರಿ 23ರ ರಾತ್ರಿ ಮತ್ತು 24ರ ಬೆಳಗಿನ ಜಾವದ ಅವಧಿಯಲ್ಲಿ ನಡುಬೇಗಾರು, ಬೇಗಾರು ಕೈಮರ ಹಾಗೂ ನಿಲಂದೂರು ಗ್ರಾಮದ ಸ್ಕೂಲುಗುಡ್ಡೆ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಒಟ್ಟು ಮೂರು ಸೋಲಾರ್ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. ಈ ಸೋಲಾರ್ ದೀಪಗಳನ್ನು 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಅನುದಾನದ ಅಡಿಯಲ್ಲಿ 2020ರಲ್ಲಿ ಅಳವಡಿಸಲಾಗಿತ್ತು. ಕಳ್ಳತನವಾಗಿರುವ ಈ ಬ್ಯಾಟರಿಗಳ ಒಟ್ಟು ಮೌಲ್ಯ ಸುಮಾರು 74,850 ರೂಪಾಯಿಗಳೆಂದು ಅಂದಾಜಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "